ಪ್ರಕಾಶ್ ಸಿಂಗ್ ಬಾದಲ್ (ಹುಟ್ಟು ೮ ಡಿಸೆಂಬರ್ ೧೯೨೭) ೨೦೦೭ರಿಂದ ೧೧ ಮಾರ್ಚ್ ೨೦೧೭ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ೧೯೭೦-೧೯೭೧,೧೯೭೭-೧೯೮೦ ಮತ್ತು ೧೯೯೭-೨೦೦೨ರ ಅವಧಿಯಲ್ಲಿ ಕೂಡ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೫-೨೦೦೮ರ ಅವಧಿಗೆ ಶಿರೋಮಣಿ ಅಕಾಲಿ ದಳ ಪಕ್ಷದ ಅಧ್ಯಕ್ಷರಾಗಿಯೂ ಇದ್ದರು. ೨೦೦೮ರಿಂದ ತಮ್ಮ ಪುತ್ರ ಮತ್ತು ಉಪ-ಮುಖ್ಯಮಂತ್ರಿ ಸುಖ್‌ಬೀರ ಸಿಂಗ್ ಬಾದಲ್‌ರನ್ನು ಪಕ್ಷದ ಅಧ್ಯಕ್ಷರಾಗಿ ನೇಮಕ‌ಗೈದರು. ಶಿರೋಮಣಿ ಅಕಾಲಿ ದಳ ಪಕ್ಷದ ಮುಖಂಡರಾದ ಕಾರಣ ಗುರುದ್ವಾರ ಪ್ರಬಂಧಕ ಕಮಿಟಿಯ ಕಾರ್ಯ ನಿರ್ವಹಣೆಯಲ್ಲಿ ಬಾದಲ್‌ರಿಗೆ ಹೆಚ್ಚು ಪ್ರಭಾವವುಂಟು. ದೆಹಲಿ ಸಿಖ್ ಪ್ರಬಂಧಕ ಕಮಿಟಿಯ ಜವಾಬ್ದಾರಿ ಕೂಡ ಬಾದಲ್‌ರ ಹೆಗಲ ಮೇಲಿದೆ. ೨೦೧೫ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ಪ್ರಕಾಶ್ ಸಿಂಗ್ ಬಾದಲ್‌ರಿಗೆ ಲಭಿಸಿದೆ. == ಬಾಲ್ಯ == ಪ್ರಕಾಶ್ ಸಿಂಗ್ ಬಾದಲ್ ಅಬುಲ್ ಖುರಾನ ಎಂಬ ಗ್ರಾಮದಲ್ಲಿ ೮ ಡಿಸೆಂಬರ್ ೧೯೨೭ರಂದು ಜನಿಸಿದರು. ಧಿಲ್ಲೋನ್ ಜಾಟ್ ವರ್ಗಕ್ಕೆ ಸೇರಿದ ಪ್ರಕಾಶ್ ಸಿಂಗ್ ಬಾಲ್ಯದಿಂದ ನಾಯಕತ್ವದ ಗುಣ ಪ್ರದರ್ಶಿಸುತ್ತಿದ್ದರು. . == == ಬಾದಲ್ ಗ್ರಾಮದ ಸರಪಂಚರಾಗಿ ೧೯೪೭ರಲ್ಲಿ ರಾಜಕೀಯ ಜೀವನ ಶುರು ಮಾಡಿದ ಪ್ರಕಾಶ್ ಸಿಂಗ್ , ಲಂಬಿ ಗ್ರಾಮದ ಬ್ಲಾಕ್ ಕಮಿಟಿಯ ಚೇರ್‌ಮನ್ ರಾಗಿ ನಿಯುಕ್ತಿಗೊಂಡರು. ೧೯೫೭ರ ಚುನಾವಣೆಯಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ೧೯೬೯ರಲ್ಲಿ ಮರುಆಯ್ಕೆಯಾದ ಪ್ರಕಾಶ್ ಸಿಂಗ್ ಸಮಾಜ-ಕಲ್ಯಾಣ, ಪಂಚಾಯ್ತಿರಾಜ್, ಪಶುಸಂಗೋಪನೆ, ಜಲಚರ ಸಚಿವರಾಗಿ ನಿಯುಕ್ತಿಗೊಂಡರು. ೧೯೭೨,೧೯೮೦ ಮತ್ತು ೨೦೦೨ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ೨೯೯೨ರ ಚುನಾವಣೆಯನ್ನು ಶಿರೋಮಣಿ ಅಕಾಲಿ ದಳ ಪಕ್ಷ ಬಹಿಷ್ಕರಿದ್ದ ಕಾರಣ ಚುನಾವಣೆಗೆ ನಿಲ್ಲದ ಪ್ರಕಾಶ್ ಸಿಂಗ್, ಒಟ್ಟು ೧೦ ಬಾರಿ ಶಾಸಕರಾಗಿ ಆಯ್ಕೆಯಾಗೊದ್ದಾರೆ. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೃಷಿ ಮತ್ತು ನೀರಾವರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. == ಉಲ್ಲೇಖಗಳು ==